ಜೂ 17: ಚಿಕ್ಕಮಗಳೂರಿನ ಯುವತಿ ಮೇಘನಾ ಶಾನುಭಾಗ್ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6 ನೇ ಯುದ್ದ ವಿಮಾನದ ಮಹಿಳಾ ಫೈಲೆಟ್ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಭಾರತೀಯ ವಾಯುದಳದ ತರಭೇತಿ ಪಡೆದು ಆಂದ್ರದ ಭೀಂಡಗಲ್ ನಲ್ಲಿ ಶನಿವಾರ ನಡೆದ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಯುದ್ದ ವಿಮಾನದ ಮಹಿಳಾ ಫೈಲೆಟ್ ಆಗುವ ಆರ್ಹತೆ ಗಿಟ್ಟಿಸಿಕೊಂಡಿದ್ದಾಳೆ.
ಚಿಕ್ಕಮಗಳೂರಿನ ತಾಲೂಕಿನ ಮರ್ಲೆ ಗ್ರಾಮದ ನ್ಯಾಯವಾದಿ ಎಂ.ಕೆ ರಮೇಶ್ ಹಾಗೂ ಉಡುಪಿ ಗ್ರಾಹಕ ಕೌನ್ಸಿಲ್ ಅಧ್ಯಕ್ಷೆ ಶೋಭಾ ಅವರ ಪುತ್ರಿ ಎಂ.ಎರ್ ಮೇಘನಾ ಶಾನುಭಾಗ್ ತೀರಾ ಕ್ಲಿಷ್ಟ ಹಾಗೂ ಅಪರೂಪದ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯದ ಹೆಸರನ್ನು ದೇಶಮಟ್ಟದಲ್ಲಿ ಬೆಳಗಿದ್ದಾಳೆ. ತರಬೇತಿ ವೇಳೆ ತಮ್ಮ ಸಾಹಸ ಹಾಗೂ ಕಾರ್ಯ ನಿರ್ವಹಣೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಈಕೆಗೆ ಮೊದಲಿನಿದಲೂ ಸಾಹಸಮಯ ಕೆಲಸ ಮಾಡುವುದು ಮೇಘನಾಗೆ ಅಚ್ಚುಮೆಚ್ಚು, ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಅಡ್ವೆಂಚರ್ ಕ್ಲಬ್ ಸ್ಥಾಪಿಸಿ ಸ್ನೇಹಿತರೊಂದಿಗೆ ಸಾಹಸಮಯ ಚಟುವಟಿಕೆಗಳನ್ನು ನಡೆಸುತ್ತಿದ್ದಳು. ಚಾರಣ ರ್ಯಾಪ್ಟಿಂಗ್ ಜತೆಗೆ ಪರ್ವತಾರೋಹಣ ಅವರ ರಜಾ ದಿನದ ಭಾಗವಾಗಿತ್ತು. 20 ನೇ ವರ್ಷದಲ್ಲೇ ಮೊಟ್ಟಮೊದಲ ಬಾರಿಗೆ ಏಕಾಂಗಿಯಾಗಿ ಪ್ಯಾರಾ ಗ್ಲೈಡಿಂಗ್ ನಡೆಸಿದ್ದಳು. ಇದೇ ಮುಂದೆ ಜೀವನದ ದಿಕ್ಕು ಬದಲಾಯಿಸಿತು.
ತನ್ನಲ್ಲಿರುವ ಸಾಹಸದ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಸಾಧನೆಯ ಶಿಖರವೇರಲು ನಿರ್ಧರಿಸಿದರು. ಯುದ್ದ ವಿಮಾನದ ಕಾಕ್ ಪಿಟ್ ನಲ್ಲಿ ಮಹಿಳಾ ಪೈಲಟ್ ಗಳಿಗೂ ಅವಕಾಶ ಎಂಬ ವಾಯುದಳದ ಪ್ರಕಟನೆ ಅವರ
ಯೋಚನಾ ದಿಕ್ಕನ್ನೇ ಬದಲಿಸಿತು. ತತಕ್ಷಣ ಏರ್ ಫೋರ್ಸ್ ನ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸಿದ್ದತೆ ನಡೆಸಿ ಉತ್ತೀರ್ಣರಾದರು. ಆಂಧ್ರದ ಭೀಂಡಿಗಲ್ ಏರ್ ಫೋರ್ಸ್ ಅಕಾಡಮಿಯಲ್ಲಿ ಪ್ರವೇಶ ದೊರೆಯಿತು. ದೊರೆತ ಅವಕಾಶದ ಸದ್ಬಳಕೆ ಮಾಡಿಕೊಂಡ ಮೇಘನಾ ಭಾರತೀಯ ವಾಯುದಳ ಸೇರಿದ್ದಾರೆ.