ಕಾಸರಗೋಡು, ಡಿ.15 (DaijiworldNews/HR): ಸೋಮವಾರ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ 77.24 ಮತದಾನ ನಡೆದಿದೆ.
ಜಿಲ್ಲೆಯ ಒಟ್ಟು 10,48,645 ಮಂದಿ ಮತದಾರರಲ್ಲಿ 8,09,981 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 3,79,573 ಮಂದಿ ಪುರುಷರು, 4,30,406 ಮಂದಿ ಮಹಿಳೆಯರು, ಇಬ್ಬರು ಟ್ರಾನ್ಸ್ ಜೆಂಡರ್ ಗಳು ಮತದಾನ ಚಲಾಯಿಸಿದ್ದಾರೆ.
ನಗರಸಭೆಗಳ ಮಟ್ಟದಲ್ಲಿ ನೀಲೇಶ್ವರದಲ್ಲಿ ಅತ್ಯಧಿಕ ಮತದಾನ ಜರುಗಿದೆ. ಇಲ್ಲಿ ಶೇ 80.38 ಮತಚಲಾವಣೆ ಜರುಗಿದೆ. ಅತಿ ಕಡಿಮೆ ಮತದಾನ ಕಾಸರಗೋಡು ನಗರಸಭೆಯಲ್ಲಿ ನಡೆದಿದೆ. ಇಲ್ಲಿ ಶೇ 70.3 ಮತದಾನವಾಗಿದೆ.
ಬ್ಲೋಕ್ ಪಂಚಾಯತ್ಗಳ ಮಟ್ಟದಲ್ಲಿ ಅತ್ಯಧಿಕ ಮತಚಲಾವಣೆ ನೀಲೇಶ್ವರ ಬ್ಲೋಕ್ ಪಂಚಾಯತ್ನಲ್ಲಿ ನಡೆದಿದೆ. ಇಲ್ಲಿ ಶೇ 82.08 ಮತದಾನವಾಗಿದೆ. ಅತಿ ಕಡಿಮೆ ಕಾಸರಗೋಡು ಬ್ಲೋಕ್ ನಲ್ಲಿ ನಡೆದಿದ್ದು , ಇಲ್ಲಿ ಶೇ 72.9 ಮತಚಲಾವಣೆಯಾಗಿದೆ.
ಮತ ಎಣಿಕೆ ಡಿಸೆಂಬರ್ 16ರಂದು ಬೆಳಿಗ್ಗೆ 8 ಗಂಟೆಯಿಂದ ಜಿಲ್ಲೆಯ 9 ಕೇಂದ್ರಗಳಲ್ಲಿ ನಡೆಯಲಿದೆ.