ಕಾಸರಗೋಡು, ಡಿ.15 (DaijiworldNews/MB) : ಕಾಸರಗೋಡು ಡಿವೈಎಸ್ಪಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್ಪಿಗೆ ಪಿ.ಕೆ. ಸುಧಾಕರನ್ ಅವರಿಗೆ ಢಿಕ್ಕಿ ಹೊಡೆದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಇಲ್ಲಿನ ಚಂದೇರ ಸರಕಾರಿ ಶಾಲಾ ಪರಿಸರದಲ್ಲಿ ಕಾರು ಡಿವೈಎಸ್ಪಿಗೆ ಡಿಕ್ಕಿ ಹೊಡೆದ ಪರಿಣಾಮ ಡಿವೈಎಸ್ಪಿ ಸುಧಾಕರನ್ ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಮುಂದುವರೆಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಢಿಕ್ಕಿ ಹೊಡೆದ ಕಾರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದು ಈ ಕಾರು ಬಿಜು ಎಂಬವರ ಮಾಲಕತ್ವದ್ದಾಗಿದೆ ಎಂದು ತಿಳಿದು ಬಂದಿದೆ.