ಬೆಂಗಳೂರು, ಜೂ16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೊದಲು ಮುತಾಲಿಕ್ರನ್ನೇ ತನಿಖೆ ನಡೆಸಿ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಪರಶುರಾಮ್ ವಾಗ್ಮೋರೆ ಬಂಧನ ವಿಚಾರದ ಕುರಿತು ಮಾತನಾಡಿದ ಅವರು, ಬಂಧಿತ ಯುವಕ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಈತನ ಹಿಂದಿರುವ ದುಷ್ಟ ಶಕ್ತಿಯನ್ನು ಪತ್ತೆ ಹಚ್ಚಬೇಕು. ಕಾಯಿಲೆಗೆ ಮದ್ದು ಕಂಡು ಹಿಡಿದರೆ ಸಾಲುವುದಿಲ್ಲ. ಅದಕ್ಕೆ ಕಾರಣವಾದದ್ದನ್ನು ಪತ್ತೆ ಮಾಡಬೇಕು ಎಂದು ಹೇಳಿದ್ದಾರೆ.
ಇಸ್ಲಾಂ ಧರ್ಮ ಪಾಪಿಯನ್ನು ಖಂಡಿಸುವುದಿಲ್ಲ. ಪಾಪವನ್ನು ಖಂಡಿಸುತ್ತದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಜನರ ಜೀವನದಲ್ಲಿ ಹುಳಿ ಹಿಂಡಿರುವ ಪ್ರಮೋದ್ ಮುತಾಲಿಕ್ ಯಾವ ಮುಖ ಇಟ್ಟುಕೊಂಡು ದೇವರ ಬಳಿ ಹೋಗುತ್ತಾರೆ. ದೇವರ ಬಳಿ ಟಿಕೆಟ್ ಪಡೆದು ಏರ್ಪೋರ್ಟ್ನಲ್ಲಿರುವ ಮುತಾಲಿಕ್ ಬಗ್ಗೆ ನನಗೆ ತುಂಬಾ ನೋವಿದೆ. ಅವರು ಇನ್ನಾದರೂ ಪಶ್ಚಾತಾಪ ಪಟ್ಟು ಸನ್ಮಾರ್ಗದಲ್ಲಿ ಬದುಕಲಿ ಎಂದು ಸಲಹೆ ನೀಡಿದ್ದಾರೆ.