ಉಡುಪಿ, ಡಿ.14(DaijiworldNews/HR): ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಒಂದು ಮತ್ತು ಆರ್ಎಎಚ್ -1 ಸಹಯೋಗದಲ್ಲಿ, ಡಿಸೆಂಬರ್ 15, ಮತ್ತು 16ರಂದು ಬೆಳಗ್ಗೆ 10ರಿಂದ ಸಂಜೆ 5 ವರೆಗೆ ಕೋರ್ಟ್ ರೋಡ್ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಕೆನರಾ ಗೃಹ ಸಾಲಮೇಳ 2020' ಬೃಹತ್ ಗೃಹ ಸಾಲಮೇಳ ನಡೆಯಲಿದೆ.
ಗೃಹ ಸಾಲದ ಮೇಲಿನ ಬಡ್ಡಿದರ ಶೇ.6.90ರಿಂದ ಪ್ರಾರಂಭವಾಗಲಿದೆ. ಜಾಮೀನು ರಹಿತ ಸಾಲ, ಮುಂಗಡ ಪಾವತಿ ಶುಲ್ಕವಿಲ್ಲ ಆಕರ್ಷಕ ದರದಲ್ಲಿ ಸುಲಭ ಸಾಲ, ಸಾಲ ವರ್ಗಾವಣೆ ಮತ್ತು ಟಾಪ್ ಅಪ್ ಸೌಲಭ್ಯ, ಆದಾಯ ತೆರಗೆ ವಿನಾಯಿತಿ, 30 ವರ್ಷ ಗರಿಷ್ಠ ಮರು ಪಾವತಿ ಅವಧಿ ಹಾಗೂ ಯಾವದೇ ಗುಪ್ಪ ಶುಲ್ಕಇರುವುದಿಲ್ಲ ಸ್ಥಳದಲ್ಲೇ ಸಾಲದ ಮಂಜೂರಾತಿ ಪಡೆಯಲು ಪಾನ್ ಕಾರ್ಡ್, ಆಧಾರ್ ಕಾರ್ಡ್, 3 ವರ್ಷದ ಐಟಿ ರಿಟರ್ನ್, ಸ್ಯಾಲರಿ ಸ್ಲಿಪ್ ತರಕ್ಕದ್ದು . ಮಣಿಪಾಲ ಹಾಗೂ ಉಡುಪಿಯ ಹೆಸರಾಂತ ಬಿಲ್ಜರ್ಗಳು ಈ ಗೃಹ ಸಾಲ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಮತ್ತು ಸುಲಭ ಸಾಲ ಸೌಲಭ್ಯಗಳನ್ನು ಒದಗಿಸಲು ಈ ಗೃಹ ಸಾಲ ಮೇಳವನ್ನು ಆಯೋಜಿಸಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ.