ಮಂಗಳೂರು, ಜೂ15: ಕರಾವಳಿ ನಗರದಲ್ಲಿ ಶೇ.47ರಷ್ಟು ಹಿರಿಯ ನಾಗರಿಕರು ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ಹೆಲ್ಪ್ಏಜ್ ಇಂಡಿಯಾ ಬಿಡುಗಡೆ ಮಾಡಿರುವ ವರದಿಯನ್ನು ಪುನರ್ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ನಗರಾಡಳಿತ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿದ್ದಾರೆ.
ಬಾವುಟಗುಡ್ಡೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವು ಹೆಲ್ಪ್ಏಜ್ ಇಂಡಿಯಾಗೆ ಆರಂಭದಿಂದಲೂ ಸಾಕಷ್ಟು ಸಹಕಾರ ನೀಡಿದ್ದೇವೆ. ಇದೀಗ ಅವರ ಟೀಂ ಇಲ್ಲಿಗೆ ಬಂದು ಯಾರನ್ನು ಸಂಪರ್ಕ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಹೆಲ್ಪ್ಏಜ್ ಇಂಡಿಯಾದವರು ಬಂದಾಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳನ್ನು ಭೇಟಿಯಾಗಬಹುದಿತ್ತು. ಈ ಭಾಗದ ಜನರನ್ನು ಸಂಪರ್ಕಿಸಬಹುದಿತ್ತು. ಆದರೆ, ಈ ವರದಿ ಬಿಂಬಿಸುವಂತೆ ಯಾವುದು ಕೂಡ ಮಂಗಳೂರಿನಲ್ಲಿ ಇಲ್ಲ. ಇಲ್ಲಿಯ ಜನರು ಹಿರಿಯರನ್ನು ಬಹಳ ಗೌರವದಿಂದ ಕಾಣುತ್ತಾರೆ ಎಂದು ಹೇಳಿದ್ದಾರೆ.