ಉಡುಪಿ ಸೆ 26: ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಎರ್ಮಾಳು ಪೂಂದಾಡು ಅದಮಾರು ಮಠದ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. ಮೃತರನ್ನು ರವಿ ದೇವಾಡಿಗ (50) ಎಂದು ಗುರುತಿಸಲಾಗಿದ್ದು, ಪಡುಬಿದ್ರೆ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಮದ್ಯಾಹ್ನನದಿಂದ ರವಿ ನಾಪತ್ತೆಯಾಗಿದ್ದು ಮಂಗಳವಾರ ಮುಂಜಾನೆ ಅವರ ಶವ ರೈಲು ಟ್ರಾಕ್ಯ್ ಬಳಿ ಪತ್ತೆಯಾಗಿದೆ. ರವಿ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ರೈಲು ಟ್ರಾಕ್ಯ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ರೈಲಿಗೆ ಡಿಕ್ಕಿಯಾಗಿ ಮೃತರಾದರೆ ಎಂದು ತನಿಖೆ ಯಿಂದ ತಿಳಿದುಬರಬೇಕಾಗಿದೆ.ಮೃತ ದುರ್ದೈವಿ ಕಡುಬಡವರಾಗಿದ್ದು ಪತ್ನಿ ಸುಮತಿ ,ಅಭಿಷೇಕ್(14) ಮತ್ತು ಐಶ್ವರ್ಯ(8) ಇಬ್ಬರು ಕಂದಮ್ಮರನ್ನು ಅಗಲಿದ್ದಾರೆ.