ಉಡುಪಿ, ಜೂ 14 : ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ ಅವರ ಸಂಶಯಾಸ್ಪದ ಮೃತ್ಯು ಪ್ರಕರಣ ರಾಜ್ಯ ಸರಕಾರವು ಸಿಐಡಿ ತನಿಖೆಗೆ ಒಪ್ಪಿಸಿದೆ. ಸರ್ಕಾರ ಈ ಹಿನ್ನಲೆಯಲ್ಲಿ ಅಧಿಕೃತ ಪ್ರಕಟನೆ ಹೊರಡಿಸಲಾಗಿದ್ದು ಇನ್ನು 2-3 ದಿನಗಳಲ್ಲಿ ಸಿಐಡಿ ಅಧಿಕಾರಿಗಳು ಉಡುಪಿಗೆ ಆಗಮಿಸಿ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ.
ಪೆರ್ಡೂರು ಪರಿಸರದಲ್ಲಿ ಜೋಕಟ್ಟೆಯ ಹುಸೇನಬ್ಬ ಅವರು ಮೇ 29 ರಂದು ಗೋ ಸಾಗಾಟ ನಡೆಸುತ್ತಿದ್ದ ಸಂದರ್ಭ ಪೊಲೀಸರು ನಡೆಸಿದ ದಾಳಿ ನಡೆಸಿದ್ದರು. ಬಳಿಕ ಅವರ ಮೃತದೇಹವು ಕೊತ್ಯಾರು ಹಾಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಆದರೆ ಹಸನಬ್ಬ ಸಾವು ಪೊಲೀಸ್ ಕಸ್ಟಡಿಯಲ್ಲಿ ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇವರ ಅನುಮಾನಾಸ್ಪದವಾಗಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಠಾಣೆಯ ಎಸ್ಸೈ, ಇಬ್ಬರು ಪೊಲೀಸರು ಸಹಿತ 10 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.