ಮಂಗಳೂರು, ಜೂ 13 : ಯುವತಿಯನ್ನು ಯಾಮಾರಿಸಿ ವಿವಾಹವಾದ ಎಂಬ ಆರೋಪದ ಮೇಲೆ ಅನ್ಯ ಕೋಮಿನ ಯುವಕನೊಬ್ಬನಿಗೆ ಧರ್ಮದೇಟು ಬಿದ್ದ ಘಟನೆ ಜೂ 13 ರ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.
ಸುಳ್ಯದ ಸಯ್ಯದ್ ಯಾನೆ ಅರುಣ್ ಪೂಜಾರಿ ಹಲ್ಲೆಗೊಳಗಾದ ಯುವಕ. ಈತ ತಾನು ಹಿಂದೂ ಯುವಕ ಎಂದು ಪರಿಚಯಿಸಿಕೊಂಡು ಹಿಂದೂ ಯುವತಿಯ ಸ್ನೇಹ ಸಂಪಾದಿಸಿ ಆಕೆಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ಸದ್ಯ ಉಳ್ಳಾಲ ಠಾಣಾ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.