ಸೆ,25: ಮುಂದಿನ ವರ್ಷದ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಶೀಘ್ರವೇ ಮೌಢ್ಯ ನಿಷೇಧ ಕಾನೂನು ತರಬೇಕೆನ್ನುವ ಅತುರದಲ್ಲಿಯೇ ಮೌಢ್ಯ ನಿಷೇಧ ಕಾನೂನನ್ನು ಸರಳೀಕರಣ ರೂಪದಲ್ಲಿ ಮುಂದಿನ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರಕಾರ ತಯಾರಿ ನಡೆಸಿದೆ. ಇನ್ನು ಚುನಾವಣೆಯ ದೃಷ್ಟಿಯಿಂದ ಸಾಮಾನ್ಯ, ಪೂಜೆ ಪುನಸ್ಕಾರಗಳನ್ನು ದೂರವಿರಿಸಿ ಸರಕಾರ ಜಾಣ ನಡೆ ಇಟ್ಟಿದೆ. ಕರಾವಳಿಯ ಜಿಲ್ಲೆಗಳ ಕೆಲವು ದೇವಸ್ಥಾನದಲ್ಲಿ ಮಡೆ ಸ್ನಾನ. ಮಾಟ ಮಂತ್ರದ ನೆಪದಲ್ಲಿ ಮೈಮೇಲೆ ದೇವರು ಬಂದ ಸೋಗಿನಲ್ಲಿ ಜನರ ಪ್ರಾಣಕ್ಕೆ ಸಂಚಕಾರ ತರುವವರ ವಿರುದ್ದ, ದೇವರ ಹೆಸರಿನಲ್ಲಿ ಛಡಿಯೇಟು ಅಥವಾ ದೈಹಿಕವಾಗಿ ಹಲ್ಲೆ ನಡೆಸುವವರ ವಿರುದ್ದ , ಜಾತ್ರೆ ಸಂದರ್ಭದಲ್ಲಿ ಕೆಂಡ ಹಾಯುವವರ ಆಚರಣೆ ಹಾಗೂ ನಕಲಿ ಜ್ಯೋತಿಷಿಗಳನ್ನು ಮಟ್ಟ ಹಾಕಲು ಈ ಕಾಯಿದೆ ಕರಡು ಪ್ರತಿಯಲ್ಲಿ ಒಳಗೊಂಡಿದೆ ಎಂದು ಮಾದ್ಯಮ ಮೂಲಗಳು ತಿಳಿಸಿವೆ.