ಉಡುಪಿ, ಜೂ 13: ದೇಶ ವಿದೇಶದ ಪ್ರವಾಸಿಗರು ಉಡುಪಿ ನಗರವನ್ನು ನೋಡಲೆಂದು ಆಗಮಿಸಿಸುವಾಗ ಅವರಿಗೆ ಸ್ವಾಗತ ಮಾಡೋದು, ಕರಾವಾಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಬಳಿ ಅವರಿಗೆ ತ್ಯಾಜ್ಯ ರಾಶಿ. ಕಾರಣ ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಬಳಿಯೇ ತ್ಯಾಜ್ಯವು ವಿಲೇವಾರಿಗೊಳ್ಳುತ್ತಿದ್ದು. ಇದೀಗ ಇಲ್ಲಿ ತ್ಯಾಜದ ರಾಶಿಯೇ ಬಿದ್ದುಕೊಂಡಿದೆ. ಹೀಗಾಗಿ ಪರಿಸರದಲ್ಲಿ ಸಾಂಕ್ರಮಿಕ ರೋಗಗಳು ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಳೆಗಾಲ ಪ್ರಾರಂಭಗೊಂಡಿದೆ. ಇಲ್ಲಿ ಕೊಳಚೆ ತಾಜ್ಯಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕೊಳೆಯುತ್ತಿದೆ. ವಿಭಾಗಗೊಂಡ ಸಿಯಾಳ ಬೊಂಡಗಳು ಇಲ್ಲಿ ಒಂದು ಲಾರಿವಾಗುಷ್ಟು ಎಸೆಯಲಾಗಿದೆ. ಅದರಲ್ಲಿ ಮಳೆ ನಿಂತು ರೋಗವಾಹಕ ಸೊಳ್ಳೆಗಳು ಸಂತಾನೊತ್ಪತಿಗೊಳ್ಳಲು ಅನುಕೂಲವಾಗಿದೆ. ಪರಿಸರದ ಕೊಡಂಕೂರು, ನಿಟ್ಟೂರು, ಹನುಮಂತ ನಗರ, ಪೂತ್ತೂರು ಬಹಳಷ್ಟು ನಿವಾಸಿಗಳಲ್ಲಿ ಜ್ವರದ ಲಕ್ಷಣಗಳು ಕಂಡಿರುತ್ತದೆ. ಇಲ್ಲಿ ಉತ್ತರ ಕರ್ನಾಟಕದ ಜೋಪಡಿಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಮಲೇರಿಯಾ, ಡೆಂಗ್ಯೊ, ಚಿಕನ್ ಗೂನ್ಯ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ತಕ್ಷಣ ಸಂಬಂಧಪಟ್ಟವರು ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿಯಿಂದ ತೆರವುಗೊಳಿಸ ಬೇಕು. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯು ಸ್ವಚ್ಚ ಜಿಲ್ಲೆಯೆಂದು ಪ್ರಶಸ್ತಿಗೆ ಭಾಜನವಾಗಿದೆ. ದೇಶ ವಿದೇಶದ ಪ್ರವಾಸಿಗರು ಉಡುಪಿ ನಗರವನ್ನು ಪ್ರವೇಶ ಮಾಡುವಾಗಲೇ ಕರಾವಾಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಬಳಿ ಅವರಿಗೆ ತ್ಯಾಜ್ಯ ರಾಶಿಯೇ ಇಲ್ಲಿ ಸ್ವಾಗತಿಸುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡ ಬೇಕಾದ ಪರಿಸ್ಥಿತಿ ಇಲ್ಲಿ ಎದುರಾಗಿದೆ. ಬೀದಿ ನಾಯಿಗಳು ತ್ಯಾಜ್ಯದ ಕಟ್ಟುಗಳನ್ನು ನಡುರಸ್ತೆಯಲ್ಲಿಯೇ ಚೆಲ್ಲಾಪಿಲ್ಲಿ ಮಾಡುತ್ತಿವೆ. ಶೀಘ್ರವೇ ಸಮಸ್ಯೆಗೆ ಮುಕ್ತಿ ದೊರಕಿಸ ಬೇಕಾಗಿದೆ. -ನಿತ್ಯಾನಂದ ಒಳಕಾಡು, ಸಮಾಜಸೇವಕರು
ಈ ಪ್ರದೇಶದಲ್ಲಿ ನಗರಾಡಳಿತ ತ್ಯಾಜ್ಯ ವಿಲೇವಾರಿಗೊಳಿಸಲು ಅವಕಾಶ ನೀಡ ಬಾರದು. ಆಯಕಟ್ಟಿನ ಸ್ಥಳದಲ್ಲಿ ನಿಷೇಧ ಫಲಕವನ್ನು ಅಳವಡಿಸ ಬೇಕು. ಕಟ್ಟಡ ನಿರ್ಮಾಣದ ಸಂದರ್ಭ ಉತ್ಪತ್ತಿಯಾಗುವ ತ್ಯಾಜ್ಯ ಮಣ್ಣು ಇಲ್ಲಿಯೇ ವಿಲೇವಾರಿಗೊಳ್ಳುತ್ತಿದೆ. ಹಾಡುಹಗಲೇ ಇಷ್ಟೇಲ್ಲಾ ಪರಿಸರಕ್ಕೆ ಧಕ್ಕೆ ಬರುವ ಕೆಲಸಗಳು ನಡೆಯದಿದ್ದರು ಅಧಿಕಾರಿಗಳು ಸಂಬಂಧಪಟ್ಟವರು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸ ಎನ್ನಬಹುದು..!! - ತಾರಾನಾಥ್ ಮೇಸ್ತ ಶಿರೂರು, ಸಾಮಾಜಿಕ ಕಾರ್ಯಕರ್ತ