ಜೂ 13: 'ಹಮ್ ಫಿಟ್ ತೋ, ಇಂಡಿಯಾ ಫಿಟ್' ಚಾಲೆಂಜ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೆ ಸವಾಲು ಹಾಕಿದ್ದಾರೆ. ತಮ್ಮ ಫಿಟ್ನೆಸ್ ವಿಡಿಯೋವೊಂದನ್ನು ಟ್ವೀಟ್ ಮಾಡಿ ಮುಂದಿನ ಸವಾಲನ್ನು ಸಿಎಂಎಚ್ ಡಿಕೆ ಹಾಕಿದ್ದಾರೆ.
ಈ ಹಿಂದೆ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಕಿದ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿದ್ದ ಪ್ರಧಾನಿ ಶೀಘ್ರದಲ್ಲೇ ತಮ್ಮ ಫಿಟೆನೆಸ್ ಗುಟ್ಟು ಹೊರಹಾಕುದಾಗಿ ಟ್ವೀಟ್ ಮಾಡಿದ್ದರು.
ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ ತಾವು ಪ್ರತಿನಿತ್ಯ ಮಾಡುವ ನಡಿಗೆ, ಯೋಗ, ಪ್ರಾಣಾಯಾಮಗಳನ್ನು ಪ್ರದರ್ಶಿಸಿದ್ದಾರೆ. ಇದರೊಂದಿಗೆ ಕಲ್ಲು ಮಣ್ಣಿನ ಮೇಲೆ ನಡಿಗೆಯನ್ನು ತೋರಿಸಿದ್ದಾರೆ.ಇದರಲ್ಲಿ ಪ್ರಕೃತಿಯೊಂದಿಗೆ ಪಂಚಭೂತಗಳ ಪ್ರಥ್ವಿ,ಜಲ,ಅಗ್ನಿ,ವಾಯು ಮತ್ತು ಆಕಾಶದ ಕುರಿತು ಉಲ್ಲೇಖ ಮಾಡಿ ಟ್ರ್ಯಾಕ್ನಲ್ಲಿನ ನಡಿಗೆಯನ್ನು ಪ್ರದರ್ಶಿಸಿದ್ದಾರೆ.
ಪ್ರದಾನಿ ತಮ್ಮ ಸವಾಲನ್ನು ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಮನ್ವೆಲ್ತ್ ಬಂಗಾರ ವಿಜೇತೆ ಟಿಟಿ ಆಟಗಾರ್ತಿ ಮಾನಿಕಾ ಬಾತ್ರಾ ಮತ್ತು 40 ವರ್ಷ ದಾಟಿದ ದಿಟ್ಟ ಐಪಿಎಸ್ ಅಧಿಕಾರಿಗಳಿಗೆ ಫಿಟ್ನೆಸ್ ವಿಡಿಯೋ ಟ್ವೀಟ್ ಮಾಡುವಂತೆ ಸವಾಲು ಹಾಕಿದ್ದಾರೆ.