ಮಂಗಳೂರು, ಜೂ 12 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ತೆರಳಬೇಕಾಗಿದ್ದ ಏರ್ ಇಂಡಿಯಾ 680 ವಿಮಾನ ದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ವಿಮಾನ ತನ್ನ ಹಾರಾಟವನ್ನು ರದ್ದುಪಡಿಸಿದೆ. ಮುಂಬಯಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೂ ಕೆಲವು ತಾಂತ್ರಿಕ ಕಾರಣಗಳಿಂದ ಟೇಕ್ ಆಫ್ ಆಗದೆ ರನ್ ವೇ ಯಿಂದ ವಾಪಾಸ್ ಬಂದಿದೆ.
ವಿಮಾನದಲ್ಲಿ ಒಟ್ಟು ೧೧೦ ಪ್ರಯಾಣಿಕರಿದ್ದು, ಕೆಲವರು ಬೇರೆ ವಿಮಾನದಲ್ಲಿ ತೆರಳಿದ್ದರೆ, ಉಳಿದ 72 ಮಂದಿಗೆ ಹೊಟೇಲ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ಟೇಕ್ ಆಫ್ ಆಗದ ಕಾರಣ ತಂತ್ರಜ್ಞರಿಂದ ವಿಮಾನ ಪರಿಶೀಲನೆ ಮುಂದುವರಿದಿದ್ದು, ತಂತ್ರಜ್ಞರ ವರದಿ ಬಳಿಕವೇ ಮುಂದಿನ ನಿರ್ಧಾರದ ಕೈಗೊಳ್ಳುವುದಾಗಿ ಅಧಿಕಾರಿಗಳ ಹೇಳಿದ್ದಾರೆ.