ಪುತ್ತೂರು: ಸಾಫ್ಟ್ವೇರ್ ದಂಪತಿಗಳು ತಯಾರಿಸಿದ ಚಾಕೊಲೇಟ್ಗೆ ದೇಶ, ವಿದೇಶದಲ್ಲಿ ಬೇಡಿಕೆ
Sun, Dec 06 2020 09:34:50 AM
ಪುತ್ತೂರು, ಡಿ. 06 (DaijiworldNews/HR): ಸಾಫ್ಟ್ವೇರ್ ಎಂಜಿನಿಯರ್ ದಂಪತಿಗಳು ಕೋಕೊದಿಂದ ಚಾಕೊಲೇಟ್ಗಳನ್ನು ತಯಾರಿಸುತ್ತಿದ್ದು, ಅವರು ತಮ್ಮ ಚಾಕೊಲೇಟ್ಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಪರಿಚಯಿಸಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಚ್ಚಿಮಲೆಯ ಕೇಶವಮೂರ್ತಿ ಮತ್ತು ಪೂರ್ಣಶ್ರೀ ದಂಪತಿಗಳ ಯಶಸ್ಸಿನ ಕಥೆ.
ದಂಪತಿಗಳು ಬೆಂಗಳೂರಿನ ಸಾಫ್ಟ್ವೇರ್ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದು, ಕೊರೊನಾ ಲಾಕ್ಡೌನ್ ಸಮಯದಲ್ಲಿ ಮನೆಗೆ ಮರಳಿ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದರು, ಬಳಿಕ ಬಿಡುವಿನ ವೇಳೆಯಲ್ಲಿ ಚಾಕೊಲೇಟ್ಗಳನ್ನು ತಯಾರಿಸಿ ಇದೀಗ ಹೆಸರುಗಳಿಸಿದ್ದಾರೆ.
ಈ ಕುಟುಂಬವು ಸುಮಾರು 18 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಅಲ್ಲಿ ಸುಮಾರು 500 ಕೋಕೋ ಸಸ್ಯಗಳನ್ನು ಬೆಳೆಸಿ ಕೋಕೋ ಹಣ್ಣಿನ ಬೀಜಗಳಿಂದ ಚಾಕೊಲೇಟ್ಗಳನ್ನು ತಯಾರಿಸಲು ಯೋಚಿಸಿದರು. ಸ್ವಾವಲಂಬಿ ಬದುಕಿಗೆ ಪ್ರಧಾನಿ ನೀಡಿದ ಕರೆ ಇವರ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಂತಾಯಿತು.
ಕಳೆದ ಎಂಟು ವರ್ಷಗಳಿಂದ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಪೂರ್ಣಾಶ್ರೀ ಮತ್ತು 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಕೇಶವಮೂರ್ತಿ ಯುವ ಭಾರತೀಯರಿಗೆ ಮಾದರಿಗಳಾಗಿ ಹೊರಹೊಮ್ಮಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಸೇರಿಸದೆ ಸಾವಯವ ರೀತಿಯಲ್ಲಿ ತಯಾರಿಸಿದ ಚಾಕೊಲೇಟ್ಗಳನ್ನು ಅವರು ಆನ್ಲೈನ್ನಲ್ಲಿ ಮಾರಾಟ ಮಾಡುತ್ತಾರೆ. ಈ ಚಾಕೊಲೇಟ್ಗೆ ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಬೇಡಿಕೆ ಇದೆ. ಅವರು ತಯಾರಿಸುವ ಚಾಕೊಲೇಟ್ಗಳು ಡಾರ್ಕ್ ಚಾಕೊಲೇಟ್ಗಳಂತೆ ಕಡಿಮೆ ಸಕ್ಕರೆಯನ್ನು ಹೊಂದಿರುತ್ತವೆ.