ಮಂಗಳೂರು, ಜೂ 11: ತೀವ್ರ ಮಳೆ ಹಾಗೂ ಪ್ರಕೃತಿ ವಿಕೋಪದಿಂದಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೩ ಮನೆಗಳು ಸಂಪೂರ್ಣ ಹಾಗೂ ಭಾಗಶಃ ಹಾನಿಯಾಗಿದ್ದು, ಆ ಎಲ್ಲಾ ಕುಟುಂಬಗಳಿಗೆ 10 ದಿನಗಳೊಳಗಾಗಿ ಪರಿಹಾರ ವಿತರಣೆ ಮಾಡಲು ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ತಹಶೀಲ್ದಾರ್ ಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರು ಕ್ಷೇತ್ರದ ವಿವಿಧೆಡೆ ಗಾಳಿ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಜೂ 10 ರಂದು ಭಾನುವಾರ ಭೇಟಿ ನೀಡಿ ಶೀಘ್ರ ಪರಿಹಾರ ವಿತರಿಸಲು ತಿಳಿಸಿದ್ದಾರೆ.
ಸಚಿವರು ಹಾನಿಗೀಡಾದ ಸುಭಾಷ್ ನಗರದ ಇಸ್ಮಾಯಿಲ್, ಮುನ್ನೂರು ಮಜಲ್ ತೋಟದಲ್ಲಿ ಹಾನಿಗೀಡಾದ ಸುಂದರ ಹಾಗೂ ಲೂಸಿ ಅವರ ಮನೆಯನ್ನು ಭೇಟಿ ನೀಡಿ ತಕ್ಷಣ ಪರಿಹಾರದ ಭರವಸೆ ನೀಡಿದರು. ನಂತರ ಅಂಬ್ಲಮೊಗರು-ಮುನ್ನೂರು ಸೇತುವೆ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಅದಕ್ಕೆ ಪರ್ಯಾಯವಾಗಿ ನಿರ್ಮಿಸಿದ ರಸ್ತೆಯ ತುಂಬಾ ಮಳೆ ನೀರು ತುಂಬಿ ಹಾನಿಯಾಗಿದ್ದು, ಅದನ್ನು ದುರಸ್ತಿಗೊಳಿಸಲು ಸ್ಥಳೀಯ ಗ್ರಾ.ಪಂ.ಗೆ ಸೂಚಿಸಿದರು.