ಉಡುಪಿ, ಜೂ08: ದೇವಾಲಯಗಳಲ್ಲಿ ಅಳವಡಿಸುವ ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸಬೇಕು ಎಂದು ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಎಂಜಿಎಂ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ದೇವಾಲಯಗಳಲ್ಲಿ ಅಳವಡಿಸುವ ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸಬೇಕು. ಇದನ್ನು ಪ್ರಧಾನಿ ಅಥವಾ ಆಳುವ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಆಯಾ ಧರ್ಮದವರು ಅವರವರ ದೇವಾಲಯದಲ್ಲಿ ಪ್ರಾರ್ಥನೆಯನ್ನು ಮಾಡಲಿ. ಆದರೆ ಧ್ವನಿವರ್ಧಕ ಬಳಸುವುದು ನಿಲ್ಲಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ದೇಶ ರಜೆಗಳ ದೇಶವಾಗಿದೆ. ಬೇರೆ ಯಾವ ದೇಶದಲ್ಲಿಯೂ ಇಷ್ಟೊಂದು ರಜೆಗಳಿಲ್ಲ. ಆದರೆ ಭಾರತ ದೇಶದಲ್ಲಿ ಅನೇಕ ರಜೆಗಳಿದೆ. ಇಲ್ಲಿ ಜಾತಿಗೊದು ರಜೆ ನೀಡಲಾಗುತ್ತದೆ. ಇದನ್ನು ಪ್ರಧಾನಿ ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇವಲ ಆ.15ರಂದು ರಜೆ ನೀಡಿದರೆ ಸಾಕು ಎಂದು ವಿನಂತಿಸಿಕೊಂಡಿದ್ದಾರೆ.
ಇದೇ ವೇಳೆ ಡಾ. ಹಂಪ ನಾಗರಾಜಯ್ಯ ಅವರಿಗೆ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಯನ್ನು ನೀಡಲಾಯಿತು.