ಕಾಸರಗೋಡು, ನ.26 (DaijiworldNews/PY): ಜಿಲ್ಲೆಯಲ್ಲಿ ಗುರುವಾರ 86 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಗುರುವಾರ ಕೊರೊನಾ ಸೋಂಕು ದೃಢಪಟ್ಟ 86 ಮಂದಿಯ ಪೈಕಿ 84 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಈ ನಡುವೆ ಇಂದು 67 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 20,198 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 1,033 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ ಒಟ್ಟು 21,459 ಮಂದಿಗೆ ಸೋಂಕು ತಗಲಿದ್ದು, 228 ಮಂದಿ ಮೃತಪಟ್ಟಿದ್ದಾರೆ. ಸದ್ಯ 7,223 ಮಂದಿ ನಿಗಾದಲ್ಲಿದ್ದಾರೆ.