ಜೂ, 07: ರಾಜ್ಯದ ಆಡಳಿತ ಯಂತ್ರದ ಕೇಂದ್ರ ಸ್ಥಳವಾದ ಬಹುಮಹಡಿಗಳಿರುವ ಕಟ್ಟಡದಲ್ಲಿರುವ ಸಚಿವಾಲಯದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಾತಿ ಕುರಿತಂತೆ ಜನವರಿಯಿಂದ ಏಪ್ರಿಲ್ ವರೆಗಿನ ವರದಿ ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ.
ಸಾಂದರ್ಭಿಕ ಚಿತ್ರ
ಸಚಿವಾಲಯದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ಪ್ರತಿದಿನ ತಡವಾಗಿ ಹಾಜರಾಗುತ್ತಿದ್ದು, ಸಂಜೆ 5.30 ಕ್ಕೆ ಮೊದಲು ಕಚೇರಿಯಿಂದ ಹೊರಡುತ್ತಿರುವ ಕುರಿತಂತೆ ಜಗದೀಶ್ ರೆಡ್ಡಿ ನಟರಾಜ್ ಹಾಗೂ ಮತ್ತಿತ್ತರರು ದೂರು ನೀಡಿರುವ ಹಿನ್ನಲೆಯಲ್ಲಿ 2012ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಸರ್ಕಾರಿ ನೌಕರರ ಸಮಯ ಪ್ರಜ್ಞೆ ,ಕಾರ್ಯ ನಿಷ್ಟೆ ಹಾಗೂ ಜಾಗೃತಿ ಅನುಸರಿಸಲು ಎಲ್ಲಾ ಇಲಾಖೆಯ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪತ್ರ ಬರೆದಿದೆ.
ಜನವರಿಯಿಂದ ಏಪ್ರಿಲ್ ವರೆಗಿನ ಅವಧಿಯಲ್ಲಿ ಕಚೇರಿಗೆ ವಿಳಂಬವಾಗಿ ಬಂದ ವಿಚಾರ ಬೆಳಕಿಗೆ ಬಂದರೆ ಅಂಥವರ ರಜೆಯನ್ನು ಕಡಿತಗೊಳಿಸಿ ರಜೆ ಕೈಗೊಳ್ಳಬೇಕು. ಈ ಕುರಿತು ಜೂ 30ರ ಒಳಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರದಿ ನೀಡಬೇಕು ಎಂದು ತಿಳಿಸಿದೆ.