ಅಟ್ಟಪ್ಪಾಡಿ, ಜೂ: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕಾರಣ ಬೆಡ್ ಶೀಟ್ ನಿಂದ ತಯಾರಿಸಿದ ಜೋಲಿಯಲ್ಲಿ ಹೊತ್ತು ಏಳು ಕಿಮೀ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ಕೇರಳದ ಪಾಲ್ಗಾಟ್ನ ಅಟ್ಟಪ್ಪಾಡಿಯಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯದ 27 ವರ್ಷದ , ನವಮಾಸದ ತುಂಬಿದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಲಭ್ಯವಾಗಿಲ್ಲ. ಈ ಕಾರಣಕ್ಕೆ ಅವರ ಸಂಬಂಧಿಕರು ಮಹಿಳೆಯನ್ನು ಕಟ್ಟಿಗೆಗೆ ಬಟ್ಟೆಯನ್ನು ಕಟ್ಟಿ ಸಿದ್ಧಪಡಿಸಿದ ಜೋಲಿಯಲ್ಲಿರಿಸಿ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಹರಿದಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹರಸಾಹಸ ಮಾಡಿ ಮುಖ್ಯ ರಸ್ತೆಗೆ ಬಂದು ಗರ್ಭಿಣಿಯನ್ನು ಕೊಟ್ಟತಾರದಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಬಳಿಕ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ.