ಕಾಸರಗೋಡು, ನ. 24 (DaijiworldNews/HR): ಜಿಲ್ಲೆಯಲ್ಲಿ ಮಂಗಳವಾರ 99 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
99 ಮಂದಿಯಲ್ಲಿ 95 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.
ಇನ್ನು 103 ಮಂದಿ ಗುಣಮುಖರಾಗಿದ್ದು, 978 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದು, 6957 ಮಂದಿ ನಿಗಾದಲ್ಲಿದ್ದಾರೆ.