ಬೆಂಗಳೂರು ಸೆ25: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೃದಯ ಸಂಭಂದಿಸಿದ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಅವರನ್ನು ಸೋಮವಾರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಭೇಟಿ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, 'ಆಪರೇಷನ್ ಆಗಿ 48 ಗಂಟೆ ಕಳೆದಿದೆ. ಆದರೆ ವೈದ್ಯರು ಹೇಳುವ ತನಕ ಯಾರೂ ಭೇಟಿ ಆಗೋದು ಬೇಡ ಎಂದಿದ್ದಾರೆ. ಸಹಜವಾಗಿಯೇ ಆಗುಹೋಗುಗಳ ಬಗ್ಗೆ ಮಾತನಾಡುತ್ತಾರೆ, ವಿಚಾರಿಸುತ್ತಾರೆ ಆದರೆ ಅದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದಮ್ತೆ ಕಿವಿಮಾತು ಹೇಳಿದ್ದೇನೆ ಎಂದರು. ಹೆಚ್ ಡಿ ಕೆ ಆರೋಗ್ಯದಲ್ಲಿ ತುಂಬಾ ಸುಧಾರಣೆ ಆಗಿದೆ, ಇವತ್ತು ಅಥವಾ ನಾಳೆ ವಾರ್ಡ್ ಗೆ ಶಿಫ್ಟ್ ಮಾಡಬಹುದು' ಎಂದಿದ್ದಾರೆ
ಕುಮಾರಸ್ವಾಮಿ ಅವರು ಕೆಲವು ತಿಂಗಳಿನಿಂದ ನಿರಂತರವಾಗಿ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಮ್ಮಿನಿಂದ ಹೃದಯದ ಮೇಲೆ ತೀವ್ರ ಒತ್ತಡ ಬಿದ್ದು, ಕಳೆದ ಕೆಲ ದಿನಗಳಿಂದ ಹೃದಯದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ, ಕುಮಾರಸ್ವಾಮಿ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಇದೀಗ ಚಿಕಿತ್ಸೆ ಫಲಪ್ರದವಾಗಿದೆ.