ದಾವಣಗೆರೆ, ಜೂ 06 : ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ನ ಪುತ್ರನೊಬ್ಬ ತನ್ನ ಗೆಳತಿಯ ಸ್ನೇಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ತನ್ನ ಗರ್ಲ್ ಫ್ರೆಂಡ್ ಜೊತೆ ಆತ್ಮೀಯವಾಗಿದ್ದ ಎಂಬ ಕಾರಣಕ್ಕಾಗಿ ಆಕೆಯ ಸ್ನೇಹಿತನ ಮೇಲೆ ಈ ಕೃತ್ಯ ನಡೆಸಿದ್ದಾನೆ. ಕೃತ್ಯ ನಡೆಸಿದಾತನನ್ನು ದಾವಣಗೆರೆ ಪಾಲಿಕೆಯ ಕಾರ್ಪೊರೇಟರ್ ಲಿಂಗರಾಜು ಅವರ ಪುತ್ರ ರಾಕೇಶ್ ಎಂದು ಗುರುತಿಸಲಾಗಿದೆಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೀಡಾದ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಪೊಲೀಸರು ಪ್ರಕರಣ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.