ಮಂಗಳೂರು, ಜೂ. 5: ಮಂಗಳೂರಿನ ದನದ ವ್ಯಾಪಾರಿ ಹುಸೈನಬ್ಬ ಅವರ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಕುಮ್ಮಕ್ಕಿನ ಮೇರೆಗೆ ಸಂಘ ಪರಿವಾರದ , ಹಾಗೂ ಅಮಾಯಕ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿ ಬಂಧಿಸಿ ಹಿಂಸಿಸಲಾಗುತ್ತಿದೆ ಇದನ್ನು ವಿರೋಧಿಸಿ ಜೂ. 6ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಜೂನ್ 5 ರ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದಅವರು, ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ, ಪೊಲೀಸರ ಕೈವಾಡದ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು ಎಂದರು.
ದನದ ವ್ಯಾಪಾರಿ ಹುಸೈನಬ್ಬರ ಮೇಲೆ ನಮ್ಮ ಕಾರ್ಯಕರ್ತರು ದಾಳಿ ನಡೆಸಿಲ್ಲ. ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಕರ್ತವ್ಯವನ್ನು ಅವರು ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಪೊಲೀಸರಿಗೆ ಅವರನ್ನು ಒಪ್ಪಿಸಿದ ನಂತರ 15- 20 ನಿಮಿಷಗಳ ಬಳಿಕ ಪೊಲೀಸ್ ವಾಹನದಲ್ಲಿ ಠಾಣೆಗೆ ಬರುವ ದಾರಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಆದರೆ ಪ್ರಕರಣವನ್ನು ಸಂಘಟನೆಗೆ ತಗುಲಿಸುವ ಕೆಲವಾಗುತ್ತಿದ್ದು ಹುಸೈನಬ್ಬ ಹೇಗೆ ಮೃತಪಟ್ಟರೆಂಬುದು ಮರಣೋತ್ತರ ವರದಿಯಲ್ಲಿ ದೃಢವಾಗಲಿದೆ. ಹೀಗಾಗಿ ಫಾರೆನ್ಸಿಕ್ ವರದಿಯನ್ನು ಯಥಾ ಪ್ರಕಾ ಜನರ ಮುಂದಿಡಬೇಕು ಎಂದರು.