ಹಾಸನ, ಜೂ 4 : ಕಳೆದ ನಾಲ್ಕು ವರ್ಷದಿಂದ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ಕೇಂದ್ರ ಸರಕಾರದ ಮೇಲಿಲ್ಲ. ಅಲ್ಲದೆ ವಿದೇಶದಿಂದ ಕಪ್ಪು ಹಣ ತರುವ ನಿಟ್ಟಿನಲ್ಲಿ ನಾವು ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ, ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಎಷ್ಟು ಹಣ ಬಂದಿದೆ ಎಂಬ ಬಗ್ಗೆ ನನ್ನಲ್ಲಿ ಅಂಕಿ ಅಂಶ ಇಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
ಮಾದ್ಯಮದವರೊಂದಿಗೆ ಸೋಮವಾರ ಮಾತನಾಡಿದ ಅವರು,‘ಮಹದಾಯಿ ವಿವಾದ ಬಗೆಹರಿಸಲು ಅಡ್ಡಗಾಲು ಹಾಕಿದ್ದು ಕಾಂಗ್ರೆಸ್’ ಎಂದು ವಾಗ್ದಾಳಿ ನಡೆಸಿದರು.
ಇನ್ನು ಪೇಜಾವರ ಶ್ರೀಗಳ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ, ಶ್ರೀಗಳು ಅವರು ಕೇಂದ್ರ ಸರ್ಕಾರ ಕ್ಕೆ ಕಪ್ಪುಹಣ ವಾಪಸ್ ತರಲು, ಗಂಗಾ ನದಿ ನೈರ್ಮಲ್ಯೀಕರಣಕ್ಕೆ ಒತ್ತು ನೀಡಿ ಎಂದು ಸಲಹೆ ನೀಡಿದ್ದಾರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳುವುದು ಬೇಡ ಎಂದರು.
ಸರ್ಕಾರಕ್ಕೆ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭ ನೀಡಿದ್ದ ಭರವಸೆಗಳನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ತರಲಾಗಿದೆ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ತಿಳಿಸಿದರು. ಪೆಟ್ರೋಲಿಯಂ ಜಿಎಎಸ್ಗೆ ವ್ಯಾಪ್ತಿಗೆ ಒಳಪಟ್ಟ ನಂತರ ಇಂಧನ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದರು.