ಮೂಡುಬಿದಿರೆ, ಸೆ25: ರವಿವಾರ ನಡೆದ ದ.ಕನ್ನಡ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ 2017-18 ನೇ ಸಾಲಿನಲ್ಲಿ ನಡೆಯುವ ಕಂಬಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಇಲ್ಲಿನ ಸಮಾಜ ಮಂದಿರದಲ್ಲಿ ನಡೆದ ಸಭೆಯಲ್ಲಿ ವೇಳಾಪಟ್ಟಿಯ ಜತೆಯಲ್ಲಿಯೇ ಗೊಂದಲರಹಿತವಾಗಿ ಕಂಬಳ ನಡೆಸಲು ಬೇಕಾದ ನಿಯಮಗಳನ್ನು ರೂಪಿಸಲಾಯಿತು. ಕಂಬಳೋತ್ಸವವನ್ನು ಅಚ್ಚುಕಟ್ಟಾಗಿ, ಆಕರ್ಷಣೀಯವಾಗಿ, ಶಿಸ್ತು ಬದ್ಧವಾಗಿ ಆಚರಿಸಿ, ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬರಬೇಕು ಮತ್ತು ಕಂಬಳದ ಅಯೋಜಕರು ಕಂಬಳ ಕೋಣಗಳಿಗೆ ಯಾವುದೇ ಹಿಂಸೆ ನೀಡದಂತೆ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಶಾಂತರಾಮ್ ಶೆಟ್ಟು ಬರ್ಕೂರು, ಸೇರಿದಂತೆ ಸಮಿತಿಯ ಸದಸ್ಯರು, ಸಲಹೆಗಾರರು ಉಪಸ್ಥಿತರಿದ್ದರು.