ಕಾಸರಗೋಡು, ಜೂ 04: ಸೀಮೆ ಎಣ್ಣೆ ದೀಪದಿಂದ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದ ಒಂಭತ್ತು ವರ್ಷದ ಬಾಲಕಿ ಮೃತಪಟ್ಟ ಘಟನೆ ನೀಲೇಶ್ವರ ಕರಿಂದಲದಲ್ಲಿ ನಡೆದಿದೆ. ಕರಿಂದಲದ ಅಯೋನಾ ( 9) ಮೃತಪಟ್ಟವಳು .
ಮೇ 27ರಂದು ತಂದೆ - ತಾಯಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಅಯೋನಾ ಸೀಮೆ ಎಣ್ಣೆ ದೀಪ ಹಚ್ಚಿದ್ದಾಗ ಬೆಂಕಿ ವಸ್ತ್ರಕ್ಕೆ ತಗಲಿದ್ದು ಗಂಭೀರ ಸುಟ್ಟ ಗಾಯಗೊಂಡಿದ್ದ ಆಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಈಕೆ ಕುಂಬಳಪಳ್ಳಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.