ಕಾಸರಗೋಡು, ನ. 14 (DaijiworldNews/MB) : ಜಿಲ್ಲೆಯಲ್ಲಿ ಶನಿವಾರ 139 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 145 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
ಸಂಪರ್ಕದಿಂದ 136 ಮಂದಿಗೆ, ವಿದೇಶಗಳಿಂದ ಬಂದ ಮೂವರಿಗೆ ಸೋಂಕು ತಗುಲಿದೆ.
ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಪತ್ತೆಯಾಗಿದೆ. 1364 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.