ಉಡುಪಿ,ಜೂ.02: ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮತದಾರರಿಗೆ ಅಮೀಷ ಒಡ್ಡಿ ಮತಪಡೆಯುವ ಕುತಂತ್ರವನ್ನು ನಡೆಸುತ್ತಿದೆ ಎಂದು ವಿಧಾನ ಪರಿಷತ್ತ್ ಮುಖ್ಯ ಸಚೇತಕ ಐವನ್ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಥಿ ನಡೆಸಿದವರು ರಾಜ್ಯದಲ್ಲಿ ಶಿಕ್ಷಕರ ಹಾಗೂ ಪದವೀದರರ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಪಕ್ಷದಿಂದ ಪದವೀದರರ ಕ್ಷೇತ್ರದಲ್ಲಿ ಎಸ್ .ಪಿ ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಕೆ .ಕೆ ಮಂಜುನಾಥ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಚುನಾವಣ ಪ್ರಚಾರಗಳನ್ನು ಕಾಂಗ್ರೆಸ್ ಸಕ್ರೀಯವಾಗಿ ಮಾಡುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಣ್ಣ ಅಂತರದ ಮತಗಳಲ್ಲಿ ಸೋಲು ಕಂಡಿದೆ.
ಆದರೆ ಈ ಬಾರಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಶಿಕ್ಷಕರ ಬೇಡಿಕೆ ಹಾಗೂ ಸಮಸ್ಯೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚಿನ ಒತ್ತು ನೀಡಿದೆ. ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಕೂಡಾ ಕಾಂಗ್ರೆಸ್ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಕಳೆದ 5 ವರ್ಷಗಳಲ್ಲಿ ಸಿದ್ದ ರಾಮಯ್ಯ ಸರಕಾರ ಶಿಕ್ಷಕರ ಪರವಾಗಿ ಕೆಲಸ ಮಾಡಿದೆ. ಆದರೆ ಬಿಜೆಪಿ ಆಡಳಿತದಲ್ಲಿ ಇದ್ದಾಗ ಹಾಗೂ ಇಲ್ಲದಾಗಲೂ ಶಿಕ್ಷಕರ ಪರ ಕೆಲಸ ಮಾಡಿಲ್ಲ. ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತದಲ್ಲಿದೆ.
ಚುನಾವಣ ಸಂದರ್ಭ 8 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಜನರಿಗೆ ಭರವಸೆ ನೀಡಿ ಅಧಿಕಾರ ಹಿಡಿದಿತ್ತು.ಆದರೆ ತನ್ನ ನಾÀಲ್ಕು ವರ್ಷಗಳ ಆವದಿಯಲ್ಲಿ ಬರೇ 3.5 ಲಕ್ಷ ಉದ್ಯೋಗ ಸೃಷ್ಟಿ ಮಾಡಿದೆ. ಅದೇ ಕರ್ನಾಟಕದಲ್ಲಿದ್ದ ಮಾಜಿ ಸಿ ಎಂ ಸಿದ್ದ ರಾಮಯ್ಯ ಸರಕಾರ ತನ್ನ ಐದು ವರ್ಷಗಳ ಆಡಳಿತದಲ್ಲಿ 4.5 ಲಕ್ಷ ಉದ್ಯೋಗ ಸೃಷ್ಟಿಮಾಡುವ ಮೂಲಕ ರಾಜ್ಯದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿ ಮಾಡಿದೆ.
ಬಿಜೆಪಿಕೇವಲ ಬೊಗಳೆ ಬಿಡುತ್ತೇ ವಿನಃ ಕಾಯಕದಲ್ಲಿ ಏನು ಮಾಡಿ ತೋರಿಸುವುದಿಲ್ಲ. ಚುನಾವಣೆ ಹತ್ತಿರ ಬಂದಾಗ ಬಿಜೆಪಿ ಹಾಗೂ ಜೆಡಿ ಎಸ್ ಶಿಕ್ಷಕರ ಹಗೂ ಪದವೀದರರ ಪರ ಇರುವ ಸರಕಾರ ಎಂದು ಬೊಗಳೆ ಬಿಡುತ್ತೇ. ಇಗಾಗಲೇ ಈ ಎರಡು ಪಕ್ಷಗಳು ಮತದಾರರಿಗೆ ಹಣ ಹಾಗೂ ಉಡುಗೊರೆಯ ಅಮೀಷ ಒಡ್ಡಿ ಮತವನ್ನು ಪಡೆಯುವ ಕುತಂತ್ರ ನಡೆಸುತ್ತಿರುವ ಮಾಹಿತಿ ನನ್ನ ಗಮನಕ್ಕೆ ಬಂದಿದೆ.ಈ ವಿಚಾರವಾಗಿ ಚುನಾವನ ಆಯೋಗಕ್ಕೆ ದೂರು ನೀಡುವುದಾಗಿ ಎಚ್ಚರಿಕೆಯನ್ನು ನೀಡಿದರು.