ಮಂಗಳೂರು,ಮೇ 31: 5 ವರ್ಷದ ಬಾಲಕಿಯೊಬ್ಬಳು ಅಪಾರ್ಟ್ ಮೆಂಟ್ ನ 8 ನೇ ಮಹಡಿಯಿಂದ 2 ಮಹಡಿಗೆ ಬಿದ್ದು ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮೇ 30ರ ಬುಧವಾರ ಶಕ್ತಿನಗರದಲ್ಲಿ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಶಾನೆಲ್ ಜಿನಿಶೀಯಾ ಡಿಸೋಜಾ (5)ಎಂದು ಗುರುತಿಸಲಾಗಿದೆ.
ವಿಲ್ಸನ್ ಸೆಬಾಸ್ಟಿಯನ್ ಹಾಗೂ ಅಲಿತಾ ಡಿಸೋಜಾ ದಂಪತಿಯ ಪುತ್ರಿಯಾಗಿರುವ ಶಾನೆಲ್ ತನ್ನ ತಾಯಿಯಿಂದಿಗೆ ವಾಸವಾಗಿದ್ದು, ತಂದೆ ವಿಲ್ಸನ್ ಸೆಬಾಸ್ಟಿಯನ್ ಶಾರ್ಜದಲ್ಲಿ ವಾಸವಾಗಿದ್ದರು.
ಮೂಲಗಳ ಪ್ರಕಾರ ಮನೆಯ ಬೆಡ್ ರೂಂನಲ್ಲಿ ಮಲಗಿದ್ದ ಬಾಲಕಿ ನಿದ್ರೆಯಿಂದ ಎಚ್ಚೆತ್ತು, ತಾಯಿಯ ಅಲಿತಾ ಗಮನಕ್ಕೆ ಬಾರದಂತೆ ಆಟವಾಡುತ್ತಾ ಬಾಲ್ಕನಿಗೆ ಬಂದಿದ್ದಾಳೆ.ಬಳಿಕ ಬಾಲ್ಕನಿ ಗ್ರಿಲ್ ಹತ್ತಿದಾಗ ಆಯಾತಪ್ಪಿ ಕೆಳಗೆ ಎರಡನೇ ಅಂತಸ್ತಿಗೆ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದಾಳೆ.
ಇನ್ನು ಪೊಲೀಸ್ ಮಾಹಿತಿಯ ಪ್ರಕಾರ ಬೆಳಗ್ಗೆ 8.45 ಕ್ಕೆ ಶಾನೆಲ್ ಪ್ಲಾಟಿನ್ ಬೆಡ್ ರೂಮಿಗೆ ಒತ್ತಿನಲ್ಲೇ ಇರುವ ಬಾಲ್ಕನಿ ಮೇಲೆ ಹತ್ತಿ ಸ್ಳೈಡರ್ ಕಿಟಕಿಯ ಮೂಲಕ ಹೊರಗೆ ಇಣುಕುವ ವೇಳೆ ಆಯತಪ್ಪಿ 2 ನೇ ಅಂತಸ್ತಿನ ಖಾಲಿ ವರಾಂಡದ ಮೇಲೆ ಬಿದ್ದ ಪರಿಣಾಮ ತಲೆಗೆ ಹಾಗೂ ಎದೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.
ಘಟನೆ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ಲಾಟ್ ನ ಒಡತಿ ವೀಣಾ ಎಲಿಸಾ ಸಲ್ಡಾನಾ ಅದರ ಜಿ.ಪಿ.ಎ ಹೊಂದಿರುವ ವಲೇರಿಯನ್ ಮೊಂತೆರೋ ವಿರುದ್ದ ಬಾಲ್ಕಿನಿಯಲ್ಲಿ ಕಬ್ಬಿಣ ಸರಳು ಅಳವಡಿದೇ ನಿರ್ಲಕ್ಷತೆ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ