ಬೆಂಗಳೂರು, ಮೇ 31 : ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಫಲಿತಾಂಶ ಗುರುವಾರ ಹೊರಬೀಳಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 46218 ಮತಗಳ ನುಬ್ಬಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ. ಮತ ಎಣಿಕೆ ಮೈಸೂರು ರಸ್ತೆ ಹಲಗೆವಡೇರಹಳ್ಳಿಯ ಶ್ರೀ ಜ್ಞಾನಶಕ್ತಿ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಆರಂಭದಿಂದಲೂ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.
11 ಸುತ್ತಿನ ಮತ ಎಣಿಕೆಯ ಬಳಿಕ ಮುನಿರತ್ನ ಅವರು 80281 ಮತಗಳು, ಮುನಿರಾಜು ಗೌಡ ಅವರು 34064 ಮತಗಳು ಮತ್ತು ಜೆಡಿಎಸ್ನ ರಾಮಚಂದ್ರ ಅವರು 23528 ಮತಗಳನ್ನು ಪಡೆದಿದ್ದಾರೆ.
ಇಲ್ಲಿ ಒಟ್ಟು14 ಅಭ್ಯರ್ಥಿಗಳು ಕಣದಲ್ಲಿದ್ದು, ಇನ್ನು ಪಕ್ಷೇತರರಾಗಿ ಸ್ಪರ್ಧಿಸಿದ್ದ ಹುಚ್ಚ ವೆಂಕಟ್ಗೆ 376 ಮತಗಳು ನೋಟಾಗೆ 1533 ಮತಗಳು ಚಲಾವಣೆಯಾಗಿವೆ.