ಮಂಗಳೂರು, ನ. 04 (DaijiworldNews/SM): ದ.ಕ. ಜಿಲ್ಲೆಯಲ್ಲಿ ಬುಧವಾರದಂದು ಕೊರೋನಾ ಸೋಂಕಿತ ಸಂಖ್ಯೆ ಇಳಿಕೆಯಾಗಿದೆ. ಬುಧವಾರದಂದು 70 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರ ಗುಣಮುಖರಾದವ ಸಂಖ್ಯೆ ಉತ್ತಮವಾಗಿದ್ದು, 414 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಬೃಹತ್ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾದಂತಾಗಿದೆ.
ದ.ಕ. ಜಿಲ್ಲೆಯ ಬುಧವಾರದ ಕೊರೋನಾ ವರದಿ:
ಬುಧವಾರದಂದು 70 ಮಂದಿಯಲ್ಲಿ ಸೋಂಕು
ಬುಧವಾರದಂದು ಗುಣಮುಖರಾದವರು-414 ಮಂದಿ
ಒಟ್ಟು ಗುಣಮುಖರಾಗಿ ಬಿಡುಗಡೆಗೊಂಡವರು-28560
ಬುಧವಾರದಂದು ಮತ್ತೊಬ್ಬರು ಸೋಂಕಿಗೆ ಬಲಿ
ದ.ಕ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸಾವು-681
ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು-1344 ಮಂದಿ
ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು-264421 ಮಂದಿ
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ನೆಗೆಟಿವ್ ಪ್ರಕರಣಗಳು-233836
ದ.ಕ. ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು-30585