ಮಂಗಳೂರು, ಮೇ 30: ನಗರದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಎಡೆಬಿಡದೆ ಸುರಿದ ತೀವ್ರ ಮಳೆಯಿಂದ ಸಾವನ್ನಪ್ಪಿದ ಇಬ್ಬರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮೇ 30ರ ಬುಧವಾರ ಬೆಳಗ್ಗೆ ವಿತರಿಸಿದರು.
ಧರೆ ಕುಸಿದು ಸಾವನ್ನಪ್ಪಿದ ಕೆಪಿಟಿ ಉದಯನಗರದ ನಿವಾಸಿ ಮೋಹಿನಿ (60) ಹಾಗು ಕೊಡಿಯಲ್ ಬೈಲ್ ಪಿವಿಎಸ್ ಕಲಾಕುಂಜ ಸಮೀಪದ ಮಹಿಳೆ ಮುತ್ತಾಬಾಯಿ (80) ಅವರ ಕುಟುಂಬಗಳಿಗೆ ಜಿಲ್ಲಾಧಿಕಾರಿ ಪರಿಹಾರ ವಿತರಿಸಿ, ಸಾಂತ್ವನ ಹೇಳಿದರು.