ಕಾರ್ಕಳ, ನ. 02 (DaijiworldNews/SM): ಇದೀಗ ಕರಾವಳಿಯಲ್ಲಿ ಹಿರ್ಗಾನದ 7 ವರ್ಷ ಪ್ರಾಯದ ಪುಟ್ಟ ಪೋರನದ್ದೇ ಮಾತು. ಕೊರಗಜ್ಜನ ಹಾಡು ಹಾಡಿದ ಬಾಲಕ ಕಾರ್ತಿಕ್ ಇದೀಗ ಕರಾವಳಿಯ ಮನೆ ಮಾತಾಗಿದ್ದಾನೆ.
ಈತ ಗ್ರಾಮೀಣ ಪ್ರದೇಶದ ಬಾಲಕನಾಗಿದ್ದು, ಇನ್ನೂ ಕೂಡ ಶಾಲೆಯ ಮೆಟ್ಟಿಲೇರಿಲ್ಲ. ಅದಾಗಲೇ ಮೊಬೈಲ್ ನಲ್ಲಿ ಹಾಡು ಕೇಳಿದ ಬಾಲಕ ಹಾಡನ್ನು ಕರಗತಗೊಳಿಸಿದ್ದಾನೆ. ಇದೀಗ ಬಾಲಕ ಹಾಡಿರುವ ಕೊರಗಜ್ಜ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಾರ್ತಿಕ್ ಕರಾವಳಿಗರ ಮನ ಗೆದ್ದಿದ್ದಾನೆ.