ಮಂಗಳೂರು/ಕಾರ್ಕಳ, ಮೇ 29: ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಮಂಗಳವಾರ ಮುಂಜಾನೆ 3ರ ಸುಮಾರಿಗೆ ಸಿಡಿಲು ಬಡಿದು ಗ್ರಾಮ ಪಂಚಾಯತಿ ಸದಸ್ಯೆ ಶೀಲಾ (34) ಎಂಬುವರು ಮೃತಪಟ್ಟಿದ್ದಾರೆ.ಮನೆಯೊಳಗೆ ಮಲಗಿದ್ದ ಸಂದರ್ಭ ಶೀಲಾ ಅವರಿಗೆ ಸಿಡಿಲು ಹೊಡೆದಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಮಂಗಳೂರಿನ ಕೃಷ್ಣಾಪುರದ ಬ್ರಹ್ಮಶ್ರೀ ನಾರಾಯಣ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ಇಬ್ಬರು ಶಿಕ್ಷಕಿಯರಿಗೆ ಗಾಯಳಾಗಿದೆ. ಮಳೆಯ ಕಾರಣದಿಂದ ಮಕ್ಕಳು ತಡವಾಗಿ ಶಾಲೆಗೆ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಅಳಕೆಯಲ್ಲಿರುವ ಗುಜರಾತಿ ಅಂಗ್ಲ ಮಾದ್ಯಮ ಶಾಲೆಯ ಕಟ್ಟಡದ ಸುತ್ತಮುತ್ತ ಸಂಪೂರ್ಣ ಜಲಾವೃತ್ತವಾಗಿ ಮಕ್ಕಳು ಶಾಲೆಯಿಂದ ಮನೆಗೆ ತೆರಳು ಸಾಧ್ಯವಾಗದೇ ಪರದಾಟುತ್ತಿದ್ದರು. ಈ ಸಂದರ್ಭ ಧಾವಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಹೊರತಂದು ಮಕ್ಕಳನ್ನು ರಕ್ಷಿಸಿದ್ದಾರೆ.