ಉಡುಪಿ ಸೆ24: ಸೋಲಾರ್ ಬೀದಿ ದೀಪಗಳ ಬ್ಯಾಟರಿಯನ್ನು ಕಳವುಗೈದ ಘಟನೆ ಇಂದು ಬೆಳಗ್ಗೆ ಬಡ ಎರ್ಮಾಳು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಎರ್ಮಾಳು ಬಡಾ ವಿದ್ಯಾಪ್ರಬೋದಿನಿ ಆಂಗ್ಲ ಮಾಧ್ಯಮ ಶಾಲಾ ಬಳಿಯ ರಸ್ತೆ ಹಾಗೂ ಉಚ್ಚಿಲಾ ಬಡಾ ಗ್ರಾಮ ಪಂಚಾಯತ್ ಬಳಿ ಐದು ಸೋಲಾರ್ ಲೈಟನ್ನು ಅಳವಡಿಸಲಾಗಿತ್ತು. ಅದರಲ್ಲಿ ಎರಡು ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಈ ಹಿಂದೆಯೂ ಎರ್ಮಾಳು ಪರಿಸರದಲ್ಲಿ ಬ್ಯಾಟರಿ ಕಳ್ಳತನ ನಡೆದಿದ್ದು, ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ . ಇದೀಗ ಮತ್ತೆ ಬ್ಯಾಟರಿ ಕಳ್ಳರ ಜಾಲ ಸಕ್ರಿಯವಾಗಿದ್ದು ತಕ್ಷಣ ಕಳ್ಳರನ್ನು ಬಂಧಿಸುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.