ಕುಂದಾಪುರ, ಮೇ 27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರದ ೫ ನೇ ವರ್ಷದ ಸಂಭ್ರಮವನ್ನು ಆಟೋಚಾಲಕರೊಬ್ಬರು ತನ್ನದೇ ರೀತಿಯಲ್ಲಿ ವಿನೂತನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಐದು ಕಿ.ಮೀ ಪ್ರಯಾಣಕ್ಕೆ ಕೇವಲ ತಲಾ ಒಂದು ರೂ. ಮಾತ್ರ ಪಡೆದುಕೊಳ್ಳುತ್ತಿದ್ದಾರೆ.ಹಂಗಳೂರು ವಿನಾಯಕ ಆಟೋ ಸ್ಟ್ಯಾಂಡ್ ನಲ್ಲಿ ಆಟೋ ಓಡಿಸುತ್ತಿರುವ ಸತೀಸ್ ಪ್ರಭು ಅವರು ಮಾಡುತ್ತಿರುವ ಈ ಸೇವೆ ಈಗ ಪ್ರಶಂಸೆಗೆ ಪಾತ್ರವಾಗಿದೆ.
ಶನಿವಾರದಿಂದ 5 ದಿನಗಳ ಪರ್ಯಾಂತ 5 ಕಿ.ಮೀವರೆಗೆ ಕೇವಲ 1 ರೂ ದರ ನಿಗದಿಪಡಿಸಿದ್ದೇನೆ ಎನ್ನುವ ಇವರು ತನ್ನ ರಿಕ್ಷಾದ ಹಿಂಭಾಗದಲ್ಲೂ ರಿಕ್ಷಾ ಪ್ರಯಾಣ ದರ 5 ಕಿ.ಮೀ ವರೆಗೆ ಒಂದು ರೂ. ಮಾತ್ರ ಎಂಬ ಪೋಸ್ಟರ್ನ್ನು ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಮೋದಿ ಸರ್ಕಾರದ ವಾರ್ಷಿಕ ಸಂಭ್ರಮಾಚರಣೆ ಸಂದರ್ಭ ಅವರು ಇದೇ ರೀತಿ ನಡೆಸಿಕೊಂಡು ಬರುತ್ತಿದ್ದು, ಪ್ರಧಾನಿ ಮೋದಿಯ ಮೇಲಿನ ಅಭಿಮಾನಕ್ಕೆ ನನ್ನದೊಂದು ಸಣ್ಣ ಸೇವೆ ಎನ್ನುತ್ತಾರೆ ಸತೀಸ್.