ಮೇ 27: ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಕಾಂಗ್ರೆಸ್- ಜೆಡಿಎಸ್ ನಾಯಕರುಗಳ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ಸಂಪುಟದಲ್ಲಿ ಪ್ರಮುಖ ಖಾತೆ ನಮಗೇ ಬೇಕೆಂದು ದೇವೇಗೌಡರಿಗೆ ಈಗಾಗಲೇ ಕಾಂಗ್ರೆಸ್ಗೆ ಪಟ್ಟಿ ಕಳುಹಿಸಿದ್ದು, ಹೀಗಾಗಿ ಎರಡು ಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ.
ಈ ನಡುವೆ ಬಜೆಟ್ ಮಂಡಿಸುವ ಹಾಗೂ ಮಹತ್ವದ ಖಾತೆಯಾದ ಹಣಕಾಸು ಖಾತೆ ತಮ್ಮ ಬಳಿ ಇರಬೇಕು ಎಂದು ಸಿಎಂ ಕುಮಾರ ಸ್ವಾಮಿ ವಾದ ಮಂಡಿಸಿದರೆ , ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಉಪಮುಖ್ಯಮಂತ್ರಿಗೆ ಹಣಕಾಸು ಖಾತೆ ನೀಡಲಾಗಿತ್ತು. ಹೀಗಾಗಿ ನಮಗೆ ಬಿಟ್ಟುಕೊಡಬೇಕು ಎಂಬುವುದು ಕಾಂಗ್ರೆಸ್ ವಾದ .
ಇದಲ್ಲದೆ ಲೋಕೋಪಯೋಗಿ, ಸಮಾಜ ಕಲ್ಯಾಣ, ಇಂಧನ, ಗೃಹ ಇಲಾಖೆಗಳು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ತಿಳಿಸಿದರೆ ಹಣಕಾಸು, ಲೋಕೋಪಯೋಗಿ, ಇಂಧನ ಖಾತೆಗಳು ಜೆಡಿಎಸ್ ಬೇಡಿಕೆ ಇಟ್ಟಿದೆ. ಸರ್ಕಾರ ರಚನೆಯಾಗಿನಿಂದ ಈ ಕುರಿತ ಚರ್ಚೆ ಎರಡು ಪಕ್ಷದಲ್ಲಿ ಮುಂದುವರೆದಿದೆ.