ಮೇ ,27: ಐರ್ಲೆಂಡ್ ನಲ್ಲಿ ಮೃತಪಟ್ಟ ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವಿಗೆ ನ್ಯಾಯ ಒದಗಿದಂತಾಗಿದೆ. ಐರ್ಲೆಂಡ್ ಸರ್ಕಾರ ಕೊನೆಗೂ ಅಲ್ಲಿನ ಮಹಿಳೆಯರಿಗೆ ಗರ್ಭಪಾತದ ಹಕ್ಕು ನೀಡಲು ಮುಂದಾಗಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ಸಾರ್ವಜನಿಕರ ಆಗ್ರಹಕ್ಕೆ ಐರ್ಲೆಂಡ್ ಸರ್ಕಾರ ಮಣಿದಿದೆ.
ಐರ್ಲೆಂಡ್ ನಲ್ಲಿ ಕೆಲಸ ಮಾಡುತ್ತಿದ್ದ ಸವಿತಾ ಅವರಿಗೆ ಅಲ್ಲಿನ ಸರ್ಕಾರ ಗರ್ಭಪಾತ ಮಾಡಲು ನಿರಾಕರಿಸಿದ್ದರಿಂದ ಅವರು ಮೃತಪಟ್ಟಿಲ್ಲ. ವೈದ್ಯರ ನಿರ್ಲಕ್ಷದಿಂದಾಗಿ ಸವಿತಾ ಸಾವನ್ನಪ್ಪಿದ್ದಾಳೆ' ಎಂಬುದು ದೃಢಪಟ್ಟಿತ್ತು. ಈ ಬಗ್ಗೆ ಐರ್ಲೆಂಡ್ ಸಂಸತ್ತಿನಲ್ಲಿ ಭಾರಿ ಚರ್ಚೆ ನಡೆದು ಗರ್ಭಪಾತದ ವಿಶೇಷ ಮಸೂದೆ 2013ರಲ್ಲೇ ಅಂಗೀಕಾರವಾಗಿತ್ತು. ಆದರೆ, ಕಾನೂನಿನ ಮಾನ್ಯತೆ ಸಿಕ್ಕಿರಲಿಲ್ಲ. ಸವಿತಾ ಹಾಲಪ್ಪನವರ್ ಅವರ ಸಾವನ್ನು ಖಂಡಿಸಿ ಐರ್ಲೆಂಡ್ನಲ್ಲಿ ನೆಲೆಸಿರುವ ಭಾರತೀಯರು, ಐರಿಷ್ ಮಹಿಳೆಯರು ಕಳೆದ ಆರು ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದರು. ಈಗ ಮೂರೂವರೆ ದಶಕದಿಂದ ಜಾರಿಯಿದ್ದ ಗರ್ಭಪಾತ ನಿಷೇಧ ಕಾನೂನು ರದ್ದತಿಯ ಐತಿಹಾಸಿಕ ನಿರ್ಣಯಕ್ಕೆ ಐರ್ಲೆಂಡ್ ಸರ್ಕಾರ ನಿರ್ಧರಿಸಿದೆ.