ಮಂಗಳೂರು, ಅ. 26 (DaijiworldNews/HR): ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.17 ರಂದು ಪ್ರಾರಂಭವಾದ ಮಂಗಳೂರು ದಸರಾ ಉತ್ಸವ ಇಂದು ಕೊನೆಯಗೊಳ್ಳಲಿದೆ.
ಇಂದು ಸಂಜೆ.6.30 ಕ್ಷೇತ್ರದಲ್ಲಿ ವಿಸರ್ಜನಾ ಪೂಜೆ ನಡೆಯಲಿದ್ದು, ಬಳಿಕ ರಾತ್ರಿ 8 ಗಂಟೆಯಿಂದ ಕ್ಷೇತ್ರದ ಪುಷ್ಕರಣಿಯಲ್ಲಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ.
ಗಣಪತಿ, ಆದಿಶಕ್ತಿ, ನವದುರ್ಗೆಯರು, ಶಾರದಾಮಾತೆಯ ಮಣ್ಣಿನ ಮೂರ್ತಿಗಳ ವಿಸರ್ಜನೆ ನಡೆಯಲಿದೆ.
ಈ ಬಾರಿ ದಸರಾ ಮೆರವಣಿಗೆ ಇಲ್ಲದೆ ಸರಳ ರೀತಿಯಲ್ಲಿ ಆಚರಿಸಲಾಗಿದೆ.