ಬೆಂಗಳೂರು, ಮೇ 25 : ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದೆ. ಮಧ್ಯಾಹ್ನ 12 ಆರಂಭವಾದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮೊದಲು ಸ್ಪೀಕರ್ ಆಯ್ಕೆಯ ಪ್ರಕ್ರಿಯೆ ನಡೆಯಿತು.
ಸದನದಲ್ಲಿ ಹಾಜರಿದ್ದ ಶಾಸಕರಿಗೆ ವಿಶ್ವಾಸಮತ ಪ್ರಸ್ತಾಪದ ಪರ ಇರುವವರು ಹೌದು ಎಂದು ಸೂಚಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಬಳಿಕ ಹೌದು ಎಂದಾಗ ಪ್ರಸ್ತಾಪ ಅಂಗೀಕರಿಸಲ್ಪಟ್ಟು, ಬಹುಮತ ಸಾಬೀತಾಗಿದೆ ಎಂದು ಅಂಗೀಕರಿಲ್ಪಟ್ಟಿದೆ ಸ್ಪೀಕರ್ ಘೋಷಿಸಿದರು. ಬಹುಮತ ಸಾಬೀತಾದ ಹಿನ್ನೆಲೆಯಲ್ಲಿ ಆಡಳಿತ ಪಕ್ಷಗಳ ಎಲ್ಲ ಸದಸ್ಯರು ಸದನದಲ್ಲೇ ವಿಜಯದ ಸಂಕೇತ ಪ್ರದರ್ಶಿಸಿ, ಪರಸ್ಪರ ಅಭಿನಂದಿಸಿಕೊಂಡು ಸಂಭ್ರಮಿಸಿದರು. ನಂತರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಸಭಾಪತಿ ತಿಳಿಸಿದರು.