ಮಂಗಳೂರು, ಮೇ 22: ದೇವರ ನಾಡು ಕೇರಳವನ್ನು ಕಂಗೆಡಿಸಿದ್ದ, ‘ನಿಫಾ ವೈರಸ್’ ಲಕ್ಷಣಗಳಿರುವ 2 ಶಂಕಿತ ಪ್ರಕರಣಗಳು ಮಂಗಳೂರಿನಲ್ಲಿ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾಹಿತಿ ನೀಡಿದ್ದಾರೆ.
ನಗರದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಲಾ ಒಬ್ಬ ರೋಗಿಯ ಗಂಟಲು ದ್ರವದ ಮಾದರಿಯನ್ನು ಮಣಿಪಾಲ ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು ನಿಫಾ ಶಂಕೆ ವ್ಯಕ್ತವಾಗಿದೆ. ಇವರಲ್ಲಿ ಒಬ್ಬರು ಕೇರಳ ರಾಜ್ಯದವರಾಗಿದ್ದು, ಇನ್ನೊಬ್ಬರು ಸ್ಥಳೀಯ ವ್ಯಕ್ತಿ ಎಂದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣರಾವ್ ತಿಳಿಸಿದ್ದಾರೆ.
ನಿಫಾ ಸೋಂಕು ತಗುಲಿರುವ ಶಂಕೆಯ ಅಧಾರದಲ್ಲಿ ಇಬ್ಬರು ರೋಗಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಪ್ರಯೋಗಾಲಯದ ವರದಿ ಬಂದಿಲ್ಲ ಎಂದು ಇದೇ ವೇಳೆ ತಿಳಿಸಿದರು. ಸದ್ಯಕ್ಕೆ ಇದೇ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ ಜಿಲ್ಲೆಯಲ್ಲಿ ನಿಫಾ ಪ್ರಕರಣ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ.