ಮಂಗಳೂರು, ಮೇ 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 22ರ ಬೆಳಗ್ಗೆ 10 ಗಂಟೆಯವರೆಗೆ 144 ಸೆಕ್ಷನ್ ನಿಷೇದಾಜ್ಞೆ ಮುಂದುವರಿಕೆಯಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆ ಶನಿವಾರದಿಂದ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯೂ ಮತೀಯ ಮತ್ತು ರಾಜಕೀಯವಾಗಿವಾಗಿ ಸೂಕ್ಷ್ಮ ಪ್ರದೇಶವಾಗಿದ್ದು, ಈಗಾಗಲೇ ಬಂಟ್ವಾಳ ತಾಲೂಕಿನ ವಿಟ್ಲ ಭಾಗದಲ್ಲಿ ನಿಷೇದಾಜ್ಞೆಯ ನಡುವೆಯೂ ಘರ್ಷನೆ ನಡೆದಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಚಿಕ್ಕ ಚಿಕ್ಕ ವಿಚಾರಗಳು ಕೋಮುಗಲಭೆಯಾಗಿ ಬದಲಾಗುವು ಸಾಧ್ಯತೆ ಇರೋದ್ರಿಂದ ನಿಷೇದಾಜ್ಞೆ ಮೇ 22 ರವರೆಗೆ ಮುಂದುವರಿಕೆಯಾಗಿದೆ ಮತ್ತು ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.