ಕಾಸರಗೋಡು, ಅ. 14 (DaijiworldNews/PY): ಜಿಲ್ಲೆಯಲ್ಲಿ ಬುಧವಾರ 224 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ಪೈಕಿ 213 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದ್ದು, ನಾಲ್ವರು ವಿದೇಶ ಹಾಗೂ ಓರ್ವ ಹೊರರಾಜ್ಯದಿಂದ ಬಂದವರಾಗಿದ್ದಾರೆ.
ಈ ನಡುವೆ 353 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 3626 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 2222 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 4,624 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1156 ಮಂದಿ ಐಸೋಲೇಶನ್ ವಾರ್ಡ್ನಲ್ಲಿದ್ದಾರೆ
ಜಿಲ್ಲೆಯಲ್ಲಿ ಈವರೆಗೆ 15,549 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 908 ಮಂದಿ ವಿದೇಶ ಹಾಗೂ 682 ಮಂದಿ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. 13, 959 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. ಒಟ್ಟು 11,781 ಮಂದಿ ಗುಣಮುಖರಾಗಿದ್ದು, ಈವರೆಗೆ ಸೋಂಕಿನಿಂದ 142 ಮಂದಿ ಮೃತಪಟ್ಟಿದ್ದಾರೆ.