ಬೆಂಗಳೂರು, ಮೇ 19: 3 ದಿನದ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಅಧಿಕಾರಾವಧಿ ಇಂದಿಗೆ ಕೊನೆಗೊಳ್ಳಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವಿಶ್ವಾಸಮತ ಸಾಬೀತುಪಡಿಸಲು ಬಿಜೆಪಿ ಪಕ್ಷಕ್ಕೆ ಸಾಧ್ಯವಾಗದ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, 3 ದಿನದ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಅಧಿಕಾರಾವಧಿ ಇಂದಿಗೆ ಕೊನೆಗೊಳ್ಳಲಿದೆ. ಬಹುಮತವಿಲ್ಲದೆ ಸಂವಿಧಾನ ಬಾಹಿರವಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಾಡಿನ ಮತದಾರರ ಆಶಯಗಳಿಗೆ ವಿರುದ್ಧ. ಇಂದು ಸಂಜೆ ಜನಾಭಿಪ್ರಾಯಕ್ಕೆ ಜಯ ದೊರೆಯಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.