ಸುಳ್ಯ, ಸೆ23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಲು ಸಹಕಾರಿ ಬ್ಯಾಂಕ್ ಗಳು ರೈತರ ಜೊತೆಗೆ ಇಟ್ಟುಕೊಂಡಿರುವ ಉತ್ತಮ ಸಂಬಂಧ ಕಾರಣವಾಗಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.
ಅವರು ಸುಳ್ಯದ ಪಿ.ಎಲ್.ಡಿ ಬ್ಯಾಂಕ್ ಕಟ್ಟಡದ ವಿಸೃತ್ತ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಬ್ಯಾಂಕ್ಗಳು ರೈತರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ರೈತರ ಆತ್ಮಸ್ಥೈರ್ಯ ಹೆಚ್ಚಿಸಿದೆ. ರೈತರ ಜೊತೆ ಬ್ಯಾಂಕುಗಳು ಇಟ್ಟುಕೊಂಡಿರುವ ಉತ್ತಮ ಭಾಂದವ್ಯದಿಂದ ಬ್ಯಾಂಕ್ಗಳು ನೂರು ಶೇಕಡ ಸಾಲವನ್ನು ವಸೂಲಾತಿ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪಿ.ಎಲ್.ಡಿ ಬ್ಯಾಂಕ್ನ ಪೂರ್ವ ಅಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಮಾರಂಭದಲ್ಲಿ ಶಾಸಕ ಅಂಗಾರ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ,ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾದವ, ಪಿ.ಎಲ್ ಬ್ಯಾಂಕ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಉಪಾಧ್ಯಕ್ಷ ವೇಣು ಗೋಪಾಲ, ನಿರ್ದೇಶಕರು ಉಪಸ್ಥಿತರಿದ್ದರು.