ಬೆಂಗಳೂರು,ಮೇ13: ಕರ್ನಾಟಕ ವಿಧಾನ ಸಭಾ ಚುನಾವಣೆ ಮುಗಿದಿದ್ದು ಎಲ್ಲಾ ಪಕ್ಷಗಳು ತಾವು ಗೆದ್ದರೆ ಯಾರನ್ನು ಸಿಎಂ ಮಾಡುವುದು ಎಂಬ ಚರ್ಚೆಯಲ್ಲಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ದಲಿತರು ಸಿಎಂ ಆಗುವುದಾದರೆ ಸಿಎಂ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗಿದ್ದು. ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ದಲಿತ ಎಂಬ ಕಾರಣಕ್ಕೆ ಸಿಎಂ ಸ್ಥಾನ ನೀಡುವುದು ಬೇಡ ಹಿರಿಯ ಮುಖಂಡ ಅಥವಾ ಕಾರ್ಯಕರ್ತ ಎಂದು ಸಿಎಂ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು ನಾನು ಪಕ್ಷಕ್ಕಾಗಿ ನಿಷ್ಥೆಯಿಂದ ದುಡಿದಿದ್ದೇನೆ. ಈ ಹಿಂದೆಯೂ ದಲಿತ ಸಿಎಂ ಪ್ರಸ್ತಾಪ ಆಗಿತ್ತು. ಆಗಲೇ ನಾನು ದಲಿತ ಎನ್ನುವ ಕಾರಣಕ್ಕಾಗಿ ಸ್ಥಾನ ಕೊಡಬೇಡಿ ಎಂದಿದ್ದೆ. ಈಗಲೂ ನನ್ನ ನಿಲುವು ಒಂದೇ ದಲಿತ ಎಂದು ಹೈಕಮಾಂಡ್ ಬಳಿ ಸ್ಥಾನ ಕೇಳಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.