ಮಂಗಳೂರು, ಸೆ. 25(DaijiworldNews/HR): ಡ್ರಗ್ಸ್ ಸಾಗಾಟ ಹಾಗೂ ಸೇವನೆ ಆರೋಪದಲ್ಲಿ ಬಂಧನಕ್ಕೊಳಪಟ್ಟಿರುವ ಡ್ಯಾನ್ಯರ್ ಕಿಶೋರ್ ಮತ್ತು ಅಕೀಲ್ ನೌಶೀನ್ ಗೆ ಅ.9 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ಆರು ದಿನಗಳಿಂದ ನಾರ್ಕೊಟಿಕ್ ಪೊಲೀಸರ ವಶದಲ್ಲಿದ್ದ ಆರೋಪಿಗಳನ್ನು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ನಾರ್ಕೊಟಿಕ್ ಕ್ರೈಂ ಪೊಲೀಸರು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದು, ಆರೋಪಿಗಳಿಗೆ ಅ.9 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳಾದ ಕಿಶೋರ್ ಹಾಗೂ ಅಕೀಲ್ ನೌಶೀನ್ ಸೆಪ್ಟೆಂಬರ್ 19 ರಂದು ಡ್ರಗ್ಸ್ ಸಮೇತ ಬಂಧನಕ್ಕೀಡಾಗಿದ್ದರು.