ಮಂಗಳೂರು, ಮೇ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 72ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಜನರು ಮತ ಚಲಾಯಿಸಿದ ಜಿಲ್ಲೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮತದಾನ ಬಿರುಸಿನಿಂದ ಸಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳ 1,858 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಖಾಡದಲ್ಲಿರುವ 58 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಆರಂಭಗೊಂಡಿದ್ದು, ಮತದಾರ ಪ್ರಭುಗಳು ಆಯಾ ಮತಗಟ್ಟೆಗಳಿಗೆ ತೆರಳಿ ತಮ್ಮ ಮತ ಚಲಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷ ಹಾಗು 8,70,675 ಮಹಿಳಾ ಮತದಾರರು . ಮಾತ್ರವಲ್ಲ, ಜಿಲ್ಲೆಯಲ್ಲಿ ಈ ಬಾರಿ 100 ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಈಗಾಗಲೇ ಶೇಕಡಾ 72ರಷ್ಟು ಮತದಾನವಾಗಿದ್ದು, ಬೆಳ್ತಂಗಡಿ - ಶೇ. 52, ಮೂಡಬಿದ್ರೆ - ಶೇ. 43 ಮಂಗಳೂರು ನಗರ ಉತ್ತರ - ಶೇ. 48, ಮಂಗಳೂರು ನಗರ ದಕ್ಷಿಣ - ಶೇ. 39, ಮಂಗಳೂರು - ಶೇ. 47, ಬಂಟ್ವಾಳ - ಶೇ. 53 ಪುತ್ತೂರು - ಶೇ. 51 ಸುಳ್ಯ - ಶೇ. 43 ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ.