ಹೊಸದಿಲ್ಲಿ, ಮೇ11: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದು ಸತ್ಯ ಎಂಬುವುದನ್ನು ಸಿಬಿಐ ಪೊಲೀಸರು ಖಚಿತಪಡಿಸಿದ್ದಾರೆ.
ಉತ್ತರ ಪ್ರದೇಶದ ಮಖಿ ಗ್ರಾಮದಲ್ಲಿನ ಮನೆಯೊಂದರಲ್ಲಿ 2017ರ ಜೂ.4ರಂದು ಬಾಲಕಿಯನ್ನು ಅತ್ಯಾಚಾರ ನಡೆಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು. 2017ರ ಜೂ.11ರಂದು ಬಾಲಕಿಯನ್ನು ಶುಭಾಂ ಸಿಂಗ್, ಅವಧ್ ನಾರಾಯಣ ಹಾಗೂ ಬ್ರಿಜೇಶ್ ಯಾದವ್ ಅಪಹರಿಸಿದ್ದು, ಜೂ.19ರ ವರೆಗೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಹಿನ್ನೆಲೆ ಕುಲದೀಪ್ ಸಹಾಯಕನನ್ನು ವಶಕ್ಕೆ ಪಡೆದಿದ್ದ ಸಿಬಿಐ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದರು.
ಈ ವಿಚಾರಣೆ ವೇಳೆ ಕುಲದೀಪ್ ಅವರಿಂದಲೇ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಅತ್ಯಾಚಾರ ನಡೆಯುತ್ತಿದ್ದ ವೇಳೆ ಕುಲದೀಪ್ ಅವರ ಸಹಾಯಕ ಮನೆ ಹೊರಗೆ ಕಾವಲು ಕಾಯುತ್ತಿದ್ದ. ಈ ಎಲ್ಲಾ ಸಂಗತಿಗಳನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಕುಲದೀಪ್ ಅವರನ್ನು ಜಿಲ್ಲಾಧಿಕಾರಿ ಮುಂದೆ ಹಾಜರುಪಡಿಸಿ, ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಶಾಸಕ ಕುಲದೀಪ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.