ಮಂಗಳೂರು, ಸೆ.15 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು ಮತ್ತೆ 316 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಹದಿನೆಂಟು ಸಾವಿರ ದಾಟಿದೆ.
ಮಂಗಳೂರು ತಾಲೂಕಿನಲ್ಲಿ 148 ಮಂದಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಮಂಗಳವಾರದಂದು 108 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 166 ಐಎಲ್ ಐ ಪ್ರಕರಣಗಳಾಗಿವೆ. 11 ಸಾರಿ ಕೇಸ್ ಗಳಾಗಿವೆ. 31 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ದ.ಕ. ಜಿಲ್ಲೆ ಮಂಗಳವಾರ ಕೊರೋನಾ ವರದಿ:
ದ.ಕ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು 125473
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ನೆಗೆಟಿವ್ ಪ್ರಕರಣಗಳು- 107381
ಜಿಲ್ಲೆಯಲ್ಲಿ ದೃಢಪಟ್ಟ ಒಟ್ಟು ಪಾಸಿಟಿವ್ ಕೇಸ್ ಗಳು- 18092
ಮಂಗಳವಾರದಂದು ದ.ಕ. ಜಿಲ್ಲೆಯಲ್ಲಿ ಪಾಸಿಟಿವ್-316
ಮಂಗಳವಾರದಂದು ಗುಣಮುಖರಾದವರು- 322
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರು-13606 ಮಂದಿ
ಮಂಗಳವಾರ ಸೋಂಕಿಗೆ ಬಲಿಯಾದವರು - ಐವರು
ಜಿಲ್ಲೆಯಲ್ಲಿ ಒಟ್ಟು ಸೋಂಕಿಗೆ ಬಲಿಯಾದವರು-452 ಮಂದಿ
ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆಯಲ್ಲಿರುವವರು- 4034 ಮಂದಿ